ಉಡುಪಿ: ಬಾವಾಸ್ ಅಕಾಡೆಮಿಯ ಎರಡನೇ ಶಾಖೆಯ ಉಡುಪಿಯ ಉಚ್ಚಿಲದಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
ಅಕಾಡೆಮಿಯನ್ನು ಬೊಳ್ಳುರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್ ಹಾಜ್ ಅಝ್ಹರ್ ಪೈಝಿ ಬೊಳ್ಳೂರು ಉಸ್ತಾದ್ ಅವರು ದುವಾ ನೆರವೇರಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಾವಾಸ್ ಎಜುಕೇಶನಲ್ ಟ್ರಸ್ಟ್ ಇದರ ಗೌರವಧ್ಯಕ್ಷ ಅಹ್ಮದ್ ಬಾವಾ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಷರೀಫ್ ದಾರಿಮಿ ಅಲ್ ಹೈಥಮಿ. ತವಕ್ಕಲ್ ಯಂಗ್ ಮೆನ್ಸ್ ಅಧ್ಯಕ್ಷ ಇಬ್ರಾಹಿಂ, ಭಾಸ್ಕರ್ ನಗರ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್, ಸಂಸ್ಥೆಯ ಉಪ ಪ್ರಾಂಶುಪಾಲೆ ನಸೀಬಾ, ಕುಚಲ ಗ್ರಾಮ ಪಂಚಾಯತ್ ಸದಸ್ಯರಾದ ಮಜಿದ್ ಮತ್ತು ಸೌಲತ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದ 40 ವಿದ್ಯಾರ್ಥಿಗಳಿಗೆ ಉಡುಗೊರೆ ನೀಡಿ ಸನ್ಮಾನಿಸಲಾಯಿತು. ಅಲ್ಲದೆ, ಬೊಳ್ಳೂರು ಉಸ್ತಾದ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅಕಾಡೆಮಿಯಲ್ಲಿ 2ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸೌಮ್ಯ, ರೋಶನ್ ಬಿ. ಹಾಗೂ ವರ್ಷಾ ಎನ್. ಅವರಿಗೆ ಸನ್ಮಾನ ಪತ್ರ ವಿತರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಯಾಸೀರ್ ಅರಫತ್ ಸ್ವಾಗತಿಸಿದರು. ಸೌಮ್ಯ ಅವರು ವಂದಿಸಿದರು.