ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪತಿ ಮಾಡಿದ ಸಾಲ ತೀರಿಸಲಿಲ್ಲವೆಂದು ಮಹಿಳೆಯೊಬ್ಬರನ್ನ ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ವರದಿಯಾಗಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಸಿರಿಶಾ ಹಾಗೂ ದುಷ್ಕೃತ್ಯ ಎಸಗಿದ ಆರೋಪಿಯನ್ನು ಮುನಿಕಣ್ಣಪ್ಪ ಎಂದು ಗುರುತಿಸಲಾಗಿದೆ.
3 ವರ್ಷಗಳ ಹಿಂದೆ ಸಿರಿಶಾಳ ಪತಿ ಮುನಿಕಣ್ಣಪ್ಪನಿಂದ 80 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದನು. ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆ ದಂಪತಿ ತಮ್ಮ ಮಕ್ಕಳೊಂದಿಗೆ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮವನ್ನು ತೊರೆದಿದ್ದರು. ಅಲ್ಲದೇ ಸಾಲ ಪಾವತಿಸಲು ಹಾಗೂ ಕುಟುಂಬವನ್ನು ಪೋಷಿಸಲು ಸಿರಿಶಾ ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು ಎಂದು ವರದಿ ತಿಳಿಸಿದೆ.
ಸೋಮವಾರ ಮಧ್ಯಾಹ್ನ ತನ್ನ ಮಗುವಿನ ಪರೀಕ್ಷಾ ಪ್ರಮಾಣ ಪತ್ರಗಳನ್ನು ಪಡೆಯಲು ಗ್ರಾಮಕ್ಕೆ ಹಿಂತಿರುಗಿದ್ದ ಸಿರಿಶಾಳನ್ನು ತಡೆದ ಮುನಿಕಣ್ಣಪ್ಪ, ಬೇವಿನ ಮರಕ್ಕೆ ಎಳೆದು ತಂದು, ಹಗ್ಗಗಳಿಂದ ಕಟ್ಟಿ ಥಳಿಸಿದ್ದಾನೆ. ಅಲ್ಲದೇ ಸಾಲ ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂದರ್ಭ ತಡೆಯಲು ಬಂದ ಸಾರ್ವಜನಿಕರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ ಎಂದು ವರದಿ ತಿಳಿಸಿದೆ.
ಸದ್ಯ ಆರೋಪಿಯನ್ನು ಕುಪ್ಪಂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಗಂಡ ಸಾಲ ತೀರಿಸಲಿಲ್ಲ ಎಂದು ಪತ್ನಿಯ ಮರಕ್ಕೆ ಕಟ್ಟಿಹಾಕಿ ಥಳಿಸಿದ ದುಷ್ಕರ್ಮಿ