ಸುಬ್ರಹ್ಮಣ್ಯ: ಕೊಠಡಿ ಬಾಡಿಗೆಗೆ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ಯುವಕನೋರ್ವನ ಮೇಲೆ ಹಲ್ಲೆಗೈದ ಘಟನೆ ನಡೆದಿದೆ.
ಈ ಕೃತ್ಯದ ವೀಡಿಯೊ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.
ಯುವಕನೋರ್ವ ಕೊಠಡಿಯನ್ನು ವೀಕ್ಷಿಸಿದ ಬಳಿಕ ಅದನ್ನು ಪಡೆಯದೇ ತೆರಳಿದ ಕಾರಣಕ್ಕೆ ಕೊಠಡಿಯನ್ನು ನಿರ್ವಹಿಸುವ ತಂಡ ವಾಗ್ವಾದಕ್ಕಿಳಿಯಿತು. ಬಳಿಕ ಯುವಕನ ಮೇಲೆ ತಂಡದ ಓರ್ವ ಸದಸ್ಯ ಹಲ್ಲೆ ನಡೆಸಿದನು ಎಂದು ತಿಳಿದು ಬಂದಿದೆ.
ಸುಬ್ರಹ್ಮಣ್ಯದಲ್ಲಿ ಕೆಲವೆಡೆ ಹೊರಗಿನವರು ರೂಂಗಳನ್ನು ಲೀಸ್‌ಗೆ ಪಡೆದುಕೊಂಡು ಯಾತ್ರಿಕರಿಗೆ ಪೂರೈಸುವ ಕೆಲಸ ಮಾಡುತ್ತಿದ್ದು ಅವರು ಈ ಕೃತ್ಯ ಎಸಗಿರಬೇಕು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಡಹಗಲೇ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ತಂಡದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.