Home News ಬಾವನ ಜೊತೆ ಅನೈತಿಕ ಸಂಬಂಧ: ಪತಿಯ ಕೊಲೆಗೈದ ಪತ್ನಿ

ಬಾವನ ಜೊತೆ ಅನೈತಿಕ ಸಂಬಂಧ: ಪತಿಯ ಕೊಲೆಗೈದ ಪತ್ನಿ

by admin
0 comments

ನವದೆಹಲಿ: ಆರಂಭದಲ್ಲಿ ಆಕಸ್ಮಿಕ ವಿದ್ಯುತ್ ಆಘಾತದಿಂದ ಸಂಭವಿಸಿದೆ ಎಂದು ನಂಬಲಾಗಿದ್ದ 36 ವರ್ಷದ ವ್ಯಕ್ತಿಯ ಸಾವು ಪ್ರಕರಣ ಇದೀಗ ಭಯಾನಕ ಕೊಲೆ ಎಂದು ತನಿಖೆಯಿಂದ ಬಯಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಕರಣ್ ದೇವ್ ಹಾಗೂ ಕೊಲೆಗೈದ ಆರೋಪಿ ಪತ್ನಿಯನ್ನು ಸುಶ್ಮಿತಾ ಎಂದು ಗುರುತಿಸಲಾಗಿದೆ.

ಜುಲೈ 13 ರಂದು ಕರಣ್ ದೇವ್ ಅವರನ್ನು ಮಾತಾ ರೂಪಾನಿ ಮ್ಯಾಗೊ ಆಸ್ಪತ್ರೆಗೆ ಅವರ ಪತ್ನಿ ಸುಶ್ಮಿತಾ ಕರೆತಂದಿದ್ದರು. ಕರಣ್ ಆಕಸ್ಮಿಕವಾಗಿ ವಿದ್ಯುತ್‌ ಆಘಾತಕ್ಕೊಳಗಾಗಿದ್ದಾರೆ ಎಂದು ಪತ್ನಿ ಹೇಳಿಕೊಂಡಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕರಣ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು, ಕುಟುಂಬವು ಇದು ವಿದ್ಯುದಾಘಾತ ಎಂದು ನಂಬಿ ಮರಣೋತ್ತರ ಪರೀಕ್ಷೆಯನ್ನು ಕೈಬಿಟ್ಟಿತು. ಆದರೆ, ಮೃತರ ವಯಸ್ಸು ಮತ್ತು ಸಾವಿನ ಸಂದರ್ಭಗಳನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಶವಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದರು.

ಈ ಸಂದರ್ಭ ಕರಣ್ ಪತ್ನಿ ಸುಶ್ಮಿತಾ ಮತ್ತು ಸಹೋದರ ಸಂಬಂಧಿ ರಾಹುಲ್ ಆಕ್ಷೇಪಿಸಿದ್ದರು. ಆದರೆ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಲು ಶವನನ್ನು ದೀನ್ ದಯಾಳ್ ಉಪಾಧ್ಯಾಯ್ ಆಸ್ಪತ್ರೆಗೆ ಕಳುಹಿಸಿದ್ದರು.

banner

ಘಟನೆ ನಡೆದ ಮೂರು ದಿನಗಳ ಬಳಿಕ ಕರಣ್ ನ ಕಿರಿಯ ಸಹೋದರ ಕುನಾಲ್, ಕರಣ್ ನನ್ನು ಆತನ ಪತ್ನಿ ಮತ್ತು ಅವರ ಸೋದರಸಂಬಂಧಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಸುಶ್ಮಿತಾ ಮತ್ತು ರಾಹುಲ್ ನಡುವಿನ ಇನ್ಸ್ಟಾ ಗ್ರಾಮ್ ಚಾಟ್‌ನ ಪುರಾವೆಗಳನ್ನು ಸಹ ಅವರು ಒದಗಿಸಿದ್ದಾರೆ. ಅದರಲ್ಲಿ ಅವರು ಕೊಲೆ ಯೋಜನೆಯ ಬಗ್ಗೆ ಚರ್ಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕರಣ್ ಪತ್ನಿ ಮತ್ತು ಆಕೆಯ ಭಾವನ ನಡುವೆ ಅನೈತಿಕ ಸಂಬಂಧವಿತ್ತು. ಇದರಿಂದಾಗಿ ಅವರು ಕರಣ್‌ನನ್ನು ಕೊಲ್ಲಲು ನಿರ್ಧರಿಸಿದರು ಎಂದು ಚಾಟ್‌ಗಳು ಬಹಿರಂಗಪಡಿಸಿದವು.

ಅವರು ಊಟದ ಸಮಯದಲ್ಲಿ ಅವನಿಗೆ 15 ನಿದ್ರೆ ಮಾತ್ರೆಗಳನ್ನು ನೀಡಿ ಅವನು ಪ್ರಜ್ಞೆ ತಪ್ಪುವವರೆಗೂ ಕಾಯುತ್ತಿದ್ದರು. ನಿದ್ರೆ ಮಾತ್ರೆಗಳು ಸಾವಿಗೆ ಕಾರಣವಾಗುವ ಸಮಯವನ್ನು ದಂಪತಿ ಗೂಗಲ್‌ನಲ್ಲಿ ಹುಡುಕಿದ್ದಾರೆ ಎಂದು ಮೆಸೇಜ್ ಗಳು ಬಹಿರಂಗಪಡಿಸಿದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕರಣ್ ಪ್ರಜ್ಞಾಹೀನನಾಗಿದ್ದರೂ ಇನ್ನೂ ಉಸಿರಾಡುತ್ತಿದ್ದಾಗ, ಇಬ್ಬರು ಆಕಸ್ಮಿಕ ಸಾವು ಎಂದು ಬಿಂಬಿಸಲು ವಿದ್ಯುತ್ ಶಾಕ್ ನೀಡಿದರು. ಪೊಲೀಸರು ಆರೋಪಿ ಪತ್ನಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆಯ ಸಂದರ್ಭ ಅವಳು ತನ್ನ ಪ್ರಿಯಕರ, ಮೈದುನ ಜೊತೆಗೂಡಿ ತನ್ನಗಂಡನನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ‌ ಎಂದು ವರದಿ ತಿಳಿಸಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.