43
ಉಳ್ಳಾಲ: ಕೊಣಾಜೆ ಠಾಣೆ ವ್ಯಾಪ್ತಿಯ ಮೊಂಟೆಪದವು ಸಮೀಪ ಅತ್ಯಾಚಾರವೆಸಗಿ ಹತ್ಯೆಗೈದು ಸೊಂಟಕ್ಕೆ ಕಲ್ಲುಗಳನ್ನು ಕಟ್ಟಿ ಬಾವಿಗೆ ಎಸೆದ ಪ್ರಕರಣ ಸಂಬಂಧ ಆರೋಪಿಯನ್ನು ಎರಡು ತಿಂಗಳ ಬಳಿಕ ಬಿಹಾರದಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೇ 23ರಂದು ಬಾವಿಯೊಳಗೆ ಸಕಲೇಶಪುರ ಮೂಲದ ಸುಂದರಿ (36) ಅವರ ಶವ ಪತ್ತೆಯಾಗಿತ್ತು.
ಬೇರೆ ಬೇರೆ ಮನೆಗಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದ ಸುಂದರಿ ಅವರು ಮೊಂಟೆಪದವು ಸಮೀಪ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಈ ಸಂದರ್ಭ ಹತ್ತಿರದ ಮರದ ಮಿಲ್‌ನಲ್ಲಿ ಕಾರ್ಮಿಕನಾಗಿದ್ದ ಬಿಹಾರ ಮೂಲದ ಕಾರ್ಮಿಕ ಅತ್ಯಾಚಾರವೆಸಗಿ ಹತ್ಯೆ ನಡೆಸಿ ಸಮೀಪದ ತೋಟದ ಬಾವಿಗೆ ಎಸೆದಿದ್ದನು ಎಂದು ತಿಳಿದು ಬಂದಿದೆ.