15
ಸುಳ್ಯ: ಜಾಲ್ಸೂರು ಗ್ರಾಮದಲ್ಲಿ ತೋಟದಿಂದ ಹುಲ್ಲು ಹೊತ್ತುಕೊಂಡು ಬರುವಾಗ ಮನೆಯಂಗಳದಲ್ಲಿ ಜಾರಿ ಬಿದ್ದು ತಲೆಗೆ ಗಾಯಗೊಂಡಿದ್ದ ವೃದ್ಧೆ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಜಾಲ್ಸೂರು ಗ್ರಾಮದ ಕಾಟೂರು ನಿವಾಸಿ ದಿ. ತಿಮ್ಮಪ್ಪ ಗೌಡರ ಪತ್ನಿ ಕಮಲ (62) ಎಂದು ತಿಳಿದು ಬಂದಿದೆ.
ಜಾರಿ ಬಿದ್ದ ವೇಳೆ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.