25
ಶ್ರೀನಿವಾಸಪುರ: ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಕೂಲಿ ಕಾರ್ಮಿಕ ಮಹಿಳೆ ಮೃತಪಟ್ಟ ಘಟನೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ತೋಟದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಕೊಪ್ಪವಾರಿಪಲ್ಲಿಯ ಮಂಗಮ್ಮ (45) ಎಂದು ತಿಳಿದು ಬಂದಿದೆ.
ಮಹಿಳೆ ರಮೇಶ್‌ಕುಮಾರ್ ತೋಟದಲ್ಲಿ ಸುಮಾರು ವರ್ಷಗಳಿಂದ ಕೂಲಿ ಕಾರ್ಮಿಕರಾಗಿದ್ದರು. ದನಕರುಗಳಿಗೆ ಮೇವು ಕತ್ತರಿಸುವಾಗ ಯಂತ್ರಕ್ಕೆ ಸಿಲುಕಿ ದೇಹ ತುಂಡುಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.