Home News ರೀಲ್ಸ್ ಹುಚ್ಚಾಟ: ರೈಲು ಬರುತ್ತಿದ್ದಂತೆ ಹಳಿಯ ಮೇಲೆ ಮಲಗಿದ ಬಾಲಕ; ಮೂವರು ಪೊಲೀಸ್ ವಶಕ್ಕೆ

ರೀಲ್ಸ್ ಹುಚ್ಚಾಟ: ರೈಲು ಬರುತ್ತಿದ್ದಂತೆ ಹಳಿಯ ಮೇಲೆ ಮಲಗಿದ ಬಾಲಕ; ಮೂವರು ಪೊಲೀಸ್ ವಶಕ್ಕೆ

by admin
0 comments

ಭುವನೇಶ್ವ‌ರ್: ರೀಲ್ಸ್‌ಗಾಗಿ ಮೂವರು ಬಾಲಕರು ಅಪಾಯಕಾರಿ ವೀಡಿಯೊ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.

ಒಡಿಶಾದ ಪುರುನಪಾಣಿ ನಿಲ್ದಾಣದ ಸಮೀಪವಿರುವ ದಾಲುಪಲಿ ಪ್ರದೇಶದಲ್ಲಿ ಮೂವರು ಬಾಲಕರು ಅಪಾಯಕಾರಿ ರೀಲ್ಸ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ರೈಲು ಹಳಿಗಳ ಮೇಲೆ ಅತಿ ವೇಗದಲ್ಲಿ ಹಾದು ಹೋಗುವಾಗ ಬಾಲಕನೊಬ್ಬ ಅದರ ಕೆಳಗೆ ಮಲಗಿಕೊಂಡಿದ್ದಾನೆ. ಈ ಅಪಾಯಕಾರಿ ದೃಶ್ಯವನ್ನು ಬಾಲಕನ ಇಬ್ಬರು ಸ್ನೇಹಿತರು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ.

ರೈಲು ಹೋದ ಬಳಿಕ ಮೂವರು ಬಾಲಕರು ಖುಷಿಯಿಂದ ಕುಣಿದಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ ಅಪ್ಲೋಡ್ ಮಾಡಿದ ಬಳಿಕ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಆ ಬಳಿಕ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

banner

ಪೊಲೀಸರು ಇಂತಹ ಅಜಾಗರೂಕ ಕೃತ್ಯಗಳು ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತವೆ ಮತ್ತು ಕಾನೂನುಗಳನ್ನು ಉಲ್ಲಂಘಿಸುತ್ತವೆ. ರೈಲು ಹಳಿಗಳ ಮೇಲೆ ಇಂತಹ ಸಾಹಸಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮಕ್ಕಳ ಕ್ರಿಯೆಗಳ ಪೋಷಕರು ಗಮನ ಹರಿಸಬೇಕೆಂದು ಪೊಲೀಸರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ರೀಲ್ ವೈರಲ್ ಆಗುತ್ತದೆ ಎಂದು ಸ್ನೇಹಿತರು ಈ ರೀತಿ ಐಡಿಯಾ ಮಾಡಿದರು ಎಂದು ಹಳಿಯ ಮೇಲೆ ಮಲಗಿದ್ದ ಬಾಲಕ ಹೇಳಿದ್ದಾನೆ ಎಂದು‌ ಪೊಲೀಸರು ತಿಳಿಸಿದ್ದಾರೆ.

“ನಾನು ಹಳಿಗಳ ಮೇಲೆ ಮಲಗಿದೆ. ರೈಲು ಹಾದು ಹೋದಾಗ, ನನ್ನ ಹೃದಯ ಬಡಿಯುತ್ತಿತ್ತು. ನಾನು ಬದುಕುಳಿಯುತ್ತೇನೆಂದು ನಿರೀಕ್ಷಿಸಿರಲಿಲ್ಲ” ಎಂದು ಬಾಲಕ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.