10
ಮುಲ್ಕಿ: ಇಲ್ಲಿನ ಶಾಂಭವಿ ನದಿಯಲ್ಲಿ ಸುಮಾರು 50-60 ವರ್ಷ ಪ್ರಾಯದ ಗಂಡಸಿನ ಮೃತ ದೇಹ ಶನಿವಾರ ಪತ್ತೆಯಾಗಿದೆ.
ಮುಲ್ಕಿ ಕೊಳ್ಚೆಕಂಬ್ಳದ ಶಾಂಭವಿ ನದಿಯಲ್ಲಿ ಈ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದರ ವಾರಿಸುದಾರು ಮುಲ್ಕಿ ಪೊಲೀಸ್ ಠಾಣೆ 0824 229 0533ಗೆ ಸಂಪರ್ಕಿಸುವಂತೆ ಮುಲ್ಕಿ ಪೊಲೀಸರು ಕೋರಿದ್ದಾರೆ.