12
ಕಾರ್ಕಳ: ರಿಕ್ಷಾದಿಂದ ಇಳಿದು ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ನಡೆದಿದೆ.
ಮುಡಾರು ಗ್ರಾಮದ ಸುರೇಂದ್ರ ಅವರು ಜೂ. 7ರಂದು ರಾತ್ರಿ ತಮ್ಮ ಮನೆಯ ಬಳಿ ರಿಕ್ಷಾದಿಂದ ಇಳಿದು ಪಕ್ಕದಲ್ಲಿ ನಿಂತಿರುವಾಗ ಕೆರ್ವಾಶೆ ಕಡೆಗೆ ಹೋಗುತ್ತಿದ್ದ ವಿಶ್ವನಂದನ್ ಅವರು ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಸುರೇಂದ್ರ ಅವರ ಎಡಕಾಲಿನ ಮೊಣಗಂಟಿನ ಕೆಳಗೆ ಜಖಂ ಆಗಿದ್ದು, ಗಾಜಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರ ಕೂಡ ರಸ್ತೆಗೆ ಬಿದ್ದು ಮುಖ ಮತ್ತು ಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.