Home News ಬೆಳ್ತಂಗಡಿ: ಮರಳು ಅಕ್ರಮ ಸಾಗಾಟ

ಬೆಳ್ತಂಗಡಿ: ಮರಳು ಅಕ್ರಮ ಸಾಗಾಟ

by admin
0 comments

ಬೆಳ್ತಂಗಡಿ: ಕಳಿಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಜು. 13ರಂದು ಬೆಳಗ್ಗೆ ಗೇರುಕಟ್ಟೆ ಹಾಲಿನ ಸೊಸೈಟಿಯ ಸಮೀಪ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ವಾಹನ ಪರಿಶೀಲನೆ ನಡೆಸಿದಾಗ ಮರಳು ತುಂಬಿದ ಒಂದು ಲಾರಿ ಹಾಗೂ ಪಿಕಪ್ ವಾಹನ ಬಂದಿದ್ದು ಪೊಲೀಸರನ್ನು ನೋಡಿ ಪಿಕಪ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಲಾರಿ ಚಾಲಕ ಮುಹಮ್ಮದ್ ನೌಫಾಲ್‌ನನ್ನು ವಿಚಾರಿಸಿದಾಗ ಎರಡೂ ವಾಹನಗಳಲ್ಲಿದ್ದ ಮರಳಿಗೆ ಯಾವುದೇ ದಾಖಲೆಗಳು ಇಲ್ಲದಿರುವುದು ಕಂಡು ಬಂದಿದೆ.

ಎರಡೂ ವಾಹನ ಹಾಗೂ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

banner

ಈ ಕುರಿತು ಚಾಲಕರು ಹಾಗೂ ವಾಹನಗಳ ಮಾಲಕರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.