ಕಾರ್ಕಳ: ನಿಟ್ಟೆ ಕಾಲೇಜು ಮಹಿಳಾ ಹಾಸ್ಟೆಲ್‌ನ ಶೌಚಾಲಯದ ಗೋಡೆಯ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿಯಲ್ಲಿ ಪ್ರಚೋದನಕಾರಿ ಬರಹ ಬರೆದ ಪ್ರಕರಣ ಸಂಬಂಧ ಓರ್ವ ವಿದ್ಯಾರ್ಥಿನಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ನಿವಾಸಿ ಫಾತಿಮಾ ಶಬ್ದಾ (21) ಎಂದು ತಿಳಿದು ಬಂದಿದೆ.
ಮೇ 7 ರಂದು ಸಂಜೆ ಹಾಸ್ಟೆಲ್‌ನ ಮೊದಲ ಹಂತದ ಶೌಚಾಲಯದ ಕೋಣೆಯ ಗೋಡೆಯ ಮೇಲೆ ಅಶ್ಲೀಲ ಪದಗಳನ್ನು ಬಳಸಿ ಪ್ರಚೋದನಕಾರಿಯಾಗಿ ಬರೆಯಲಾಗಿದ್ದು, ಹಾಸ್ಟೆಲ್‌ನ ಕೆಲವು ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿತ್ತು.
ಈ ಕುರಿತು ನಿಟ್ಟೆ ಕಾಲೇಜಿನ ಮುಖ್ಯ ಮಹಿಳಾ ಹಾಸ್ಟೆಲ್‌ನ ಮ್ಯಾನೇಜರ್ ಅವರು ನೀಡಿದ ದೂರಿನ ಆಧಾರದ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು, ಆರೋಪಿಯಾದ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯನ್ನು ಜುಲೈ 14 ರಂದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.