Home News ಜಾನುವಾರುಗಳ ಕಳವು: ನಾಲ್ವರ ಬಂಧನ

ಜಾನುವಾರುಗಳ ಕಳವು: ನಾಲ್ವರ ಬಂಧನ

by admin
0 comments

ಮಡಿಕೇರಿ: ದಕ್ಷಿಣ ಕೊಡಗಿನ ನೋಕ್ಯ ಮತ್ತು ಭದ್ರಗೋಳ ಗ್ರಾಮದಲ್ಲಿ 2 ದನಗಳು ಹಾಗೂ ಎಮ್ಮೆಯೊಂದನ್ನು ಕಳ್ಳತನ ಮಾಡಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ವೀರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾಮದ ಉಬೈದ್ ಕೆ.ಎಂ. (37), ಪೊನ್ನಂಪೇಟೆ ಸೀತಾ ಕಾಲನಿಯ ಗಜನ್ ಗಣಪತಿ (25), ಬೇಗೂರು ಗ್ರಾಮದ ಹನೀಫ ಸಿ.ಈ. (36) ಮತ್ತು ಕೇರಳದ ಮಾನಂದವಾಡಿಯ ಅಜನಸ್ (21) ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಬೊಲೆರೋ ಪಿಕಪ್, ಮಾರುತಿ ಓಮ್ನಿ, ಟಾಟಾ ಇಂಟ್ರಾ, ಒಂದು ಚಾಕು ಮತ್ತು ಹಗ್ಗ, 3 ಮೊಬೈಲ್ ಫೋನ್ ಮತ್ತು 7 ಸಾವಿರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜೂ. 24ರಂದು ನೋಕ್ಯ ಗ್ರಾಮದ ಆನಂದ ಎ.ಎಸ್. ಅವರ 2 ದನಗಳನ್ನು ಮತ್ತು ಭದ್ರಗೋಳ ಗ್ರಾಮದ ಪಿ.ಪಿ. ಮುತ್ತಣ್ಣ ಅವರ ಎಮ್ಮೆಯೊಂದನ್ನು ಕಳ್ಳತನ ಮಾಡಲಾಗಿತ್ತು.

banner

ಡಿವೈಎಸ್‌ಪಿ ಮಹೇಶ್‌ ಕುಮಾರ್, ಸಿಪಿಐ ಶಿವರಾಜ ಆ‌ರ್. ಮುಧೋಳ್‌, ಗೋಣಿಕೊಪ್ಪಲು ಪಿಎಸ್‌ಐ ಪ್ರದೀಪ್‌ ಕುಮಾರ್ ಬಿ.ಕೆ. ಹಾಗೂ ಸಿಬ್ಬಂದಿಗಳ ವಿಶೇಷ ತಂಡ ತನಿಖೆ ನಡೆಸಿ ಕೇರಳ ಮತ್ತು ಕೊಡಗು ಜಿಲ್ಲೆಯ ಕಾನೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.