39
ಮಂಗಳೂರು: ನಗರಕ್ಕೆ ಮಾದಕ ವಸ್ತು ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಸೆನ್ ಠಾಣೆ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಯುವಕ ಹಾಸನ ಜಿಲ್ಲೆ ಸಕಲೇಶಪುರ ನಿವಾಸಿ ಧ್ರುವ್ ಡಿ. ಶೆಟ್ಟಿ (22) ಎಂದು ತಿಳಿದು ಬಂದಿದೆ.
ಗಾಂಜಾವನ್ನು ಹೊಂದಿದ್ದ ಐವರನ್ನು ಜೂ. 2ರಂದು ಪಡುಶೆಡ್ಡೆಯ ಹಾಲಾಡಿಯಲ್ಲಿ ಪೊಲೀಸರು ಬಂಧಿಸಿದ್ದರು. ಅವರಿಗೆ ಗಾಂಜಾ ಪೂರೈಕೆ ಮಾಡಿರುವವರ ಪೈಕಿ ಈತನೂ ಒಬ್ಬನಾಗಿದ್ದ ಎಂದು ತಿಳಿದು ಬಂದಿದೆ.