7
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಮತ್ತಿಕೆರೆಯಲ್ಲಿ ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ ಉಂಟಾಗಿ ಪತಿಯೋರ್ವ ತುರಿಮಣೆಯಿಂದ ಹೊಡೆದು ಪತ್ನಿಯ ಹ*ತ್ಯೆಗೈದ ಘಟನೆ ನಡೆದಿದೆ.
ಹತ್ಯೆಯಾದ ಮಹಿಳೆ ತಿಮ್ಮಮ್ಮ(65) ಎಂದು ತಿಳಿದು ಬಂದಿದೆ.
ಹತ್ಯೆಗೈದ ಆರೋಪಿ ಪತಿ ರಂಗಯ್ಯ ಎಂದು ತಿಳಿದು ಬಂದಿದೆ.
ಹತ್ಯೆಯ ಬಳಿಕ ತಿರುಪತಿಗೆ ಪರಾರಿಯಾಗಲು ಮುಂದಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.