10
ಬೆಳ್ತಂಗಡಿ: ಲಾಯಿಲ ಜಾಂಡೀಸ್ ಗೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದ ಯುವಕನೋರ್ವ, ಮತ್ತೆ ಜ್ವರ ಉಲ್ಬಣಗೊಂಡು ಮೃತಪಟ್ಟ ಘಟನೆ ಗ್ರಾಮದ ವಿವೇಕಾನಂದ ನಗರದಲ್ಲಿ ಮಂಗಳವಾರ ನಡೆದಿದೆ.
ಮೃತ ಯುವಕ ಲಾಯಿಲ ಗ್ರಾಮದ ವಿವೇಕಾನಂದ ನಗರದ ಸೋಮಣ್ಣ ಕುಂಬಾರ ಅವರ ಪುತ್ರ ಸಂದೀಪ್ ಕುಲಾಲ್ (28) ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಸಂದೀಪ್ ಅವರನ್ನು ಜಾಂಡೀಸ್ ಬಾಧಿಸಿದ್ದು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಆದರೆ ಎರಡು ದಿನಗಳಿಂದ ಮತ್ತೆ ಜ್ವರ ಉಲ್ಬಣಗೊಂಡಿದ್ದು, ಜೂ. 24ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.