Home News ಉಳ್ಳಾಲ: ಕಾರಿನಲ್ಲಿ ಎಂಡಿಎಂಎ ಮಾರಾಟ; ಆರೋಪಿಯ ಬಂಧನ

ಉಳ್ಳಾಲ: ಕಾರಿನಲ್ಲಿ ಎಂಡಿಎಂಎ ಮಾರಾಟ; ಆರೋಪಿಯ ಬಂಧನ

by admin
0 comments

ಉಳ್ಳಾಲ: ಕಾರಿನಲ್ಲಿ ಎಂಡಿಎಂಎಯನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಬ್ದುಲ್ ರಶೀದ್ ಮೊಯುದ್ದೀನ್ ಎಂದು ತಿಳಿದು ಬಂದಿದೆ.

ಈತನು ದೇರಳಕಟ್ಟೆಯ ಪನೀರ್ ನಿವಾಸಿಗಳಾದ ಇಲ್ಯಾಸ್ ಯಾನೆ ಎರಿಟಿಗಾ ಇಲ್ಯಾಸ್ ಹಾಗೂ ಆಟೋ ಅಬ್ಬಾಸ್ ಅವರಿಂದ ಮಾದಕವನ್ನು ಖರೀದಿ ಮಾಡಿ ಅದನ್ನು ಕಾರಿನಲ್ಲಿ ಸೋಮೇಶ್ವರ ರೆಸಾರ್ಟ್ ಒಂದರ ಬಳಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ‌. ಈ ಬಗ್ಗೆ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ರೆಸಾರ್ಟ್ ಗೆ ದಾಳಿ ಮಾಡಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ದಾಳಿ ಸಂದರ್ಭ ಆರೋಪಿ ಅಬ್ದುಲ್ ರಶೀದ್ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

banner

ಬಂಧಿತನ ಕಾರಿನಲ್ಲಿದ್ದ ಎಂಡಿಎಂಎಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.