Home News ಸೇತುವೆ ಕುಸಿದು 6 ಮಂದಿ ಮೃತ್ಯು: ಮುಂದುವರಿದ ಶೋಧ ಕಾರ್ಯ

ಸೇತುವೆ ಕುಸಿದು 6 ಮಂದಿ ಮೃತ್ಯು: ಮುಂದುವರಿದ ಶೋಧ ಕಾರ್ಯ

by admin
0 comments

ಪುಣೆ: ಪುಣೆಯಲ್ಲಿ ಇಂದ್ರಯಾಣಿ ನದಿಗೆ ನಿರ್ಮಿಸಲಾದ ಸೇತುವೆ ಕುಸಿದು ಆರು ಪ್ರವಾಸಿಗರು ಮುಳುಗಿ ಮೃತಪಟ್ಟ ಘಟನೆ ಕುಂಡ್ಮಾಲಾದಲ್ಲಿ ವರದಿಯಾಗಿದೆ.

ಸೇತುವೆ ಮೇಲಿದ್ದ ಸುಮಾರು 15 ರಿಂದ 20 ಪ್ರವಾಸಿಗರು ನದಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸೇರಿದಂತೆ ಪೊಲೀಸರು ಮತ್ತು ವಿಪತ್ತು ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯ ಆರಂಭವಾಗಿದೆ. ಇಲ್ಲಿಯವರೆಗೆ ಎಂಟು ಜನರನ್ನು ರಕ್ಷಿಸಲಾಗಿದ್ದು, ಇಬ್ಬರು ಮಹಿಳೆಯರು ಇನ್ನೂ ಸೇತುವೆಯ ಕೆಳಗೆ ಸಿಲುಕಿಕೊಂಡಿದ್ದಾರೆ.

ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದ್ದರೂ, ಪುಣೆ ಗ್ರಾಮೀಣ ಪ್ರದೇಶದ ಮಾವಲ್ ಪ್ರದೇಶದಲ್ಲಿ ಸೇತುವೆ ಕುಸಿತ ಸಂಭವಿಸಿದೆ ಎಂದು ವರದಿ ತಿಳಿಸಿದೆ.

banner

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.