10
ಅಂಕೋಲಾ: ಸಮುದ್ರದಲ್ಲಿ ಈಜಲು ಇಳಿದ ಪ್ರವಾಸಿಗನೊಬ್ಬ ನೀರುಪಾಲಾದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಸಮುದ್ರಪಾಲಾದ ಯುವಕನನ್ನು ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿವಾಸಿ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಎಂದು ಗುರುತಿಸಲಾಗಿದೆ.
ಬಕ್ರೀದ್ ರಜೆ ಹಿನ್ನೆಲೆ ಎರಡು ಬೈಕ್ ಗಳಲ್ಲಿ ನಾಲ್ಕು ಮಂದಿ ಗೆಳೆಯರು ಹುಬ್ಬಳ್ಳಿಯಿಂದ ಕರಾವಳಿ ತಾಲೂಕುಗಳಿಗೆ ಪ್ರವಾಸಕ್ಕೆಂದು ಬಂದಿದ್ದರು ಎಂದು ತಿಳಿದು ಬಂದಿದೆ.
ನಾಲ್ವರು ಗೆಳೆಯರು ಅಂಕೋಲಾ ಸಮುದ್ರದಲ್ಲಿ ಈಜಲು ಇಳಿದಿದ್ದರು ಎಂದು ತಿಳಿದು ಬಂದಿದೆ.
ನಾಲ್ವರ ಪೈಕಿ ಓರ್ವ ಸಮುದ್ರಪಾಲಗಿದ್ದಾನೆ ಎಂದು ತಿಳಿದು ಬಂದಿದೆ.
ಯುವಕನ ಶವವನ್ನು ಸ್ಥಳೀಯರ ಸಹಕಾರದಿಂದ ಮೇಲಕ್ಕೆ ತರಲಾಯಿತು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.