10
ಮಣಿಪಾಲ: ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ನಗದು ದೋಚಿದ ಘಟನೆ ನಡೆದಿದೆ.
ಹೆರ್ಗದ ಸುಬ್ಬಣ್ಣ ಅವರು ಮೇ 30ರಂದು ಮಂಗಳೂರಿಗೆ ಮಗನ ಮನೆಗೆ ಹೋಗಿದ್ದರು. ಸಂಜೆ ಮನೆಯ ಕೆಲಸದವರು ಬೀಗ ಹಾಕಿ ಹೋಗಿದ್ದು, ಬೆಳಗ್ಗೆ ಬಂದಾಗ ಎದುರಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಸುಮಾರು 55,100 ರೂ. ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.