ಆನೇಕಲ್: ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ಬಾಬಸಂದ್ರ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ಮಹಿಳೆ ಒಡಿಸ್ಸಾ ಮೂಲದ ಬರ್ಸಾ ಪ್ರಿಯದರ್ಶಿನಿ ಅಮೃತ (21) ಎಂದು ತಿಳಿದು ಬಂದಿದೆ.
ಕೊಲೆಗೈದ ಆರೋಪಿ ಪತಿ ಬಿಹಾರ ಮೂಲದ ಮೋಹನ್ ಕುಮಾರ್ ಎಂದು ತಿಳಿದು ಬಂದಿದೆ.
ಹೆತ್ತವರನ್ನು ಧಿಕ್ಕರಿಸಿ ಮನೆಯಿಂದ ಹೊರಬಂದು ಪ್ರೀತಿಸಿದ ಹುಡುಗನನ್ನು ಮದುವೆಯಾಗಿದ್ದ ಒಡಿಶಾ ಮೂಲದ ಗೃಹಿಣಿ ಇದೀಗ ಪತಿಯಿಂದಲೇ ಕೊಲೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ದಂಪತಿ ಕಳೆದ ಒಂದು ವಾರದ ಹಿಂದೆ ಬಾಬಸಂದ್ರ ಸಮೀಪದ ನಂಜಾ ರೆಡ್ಡಿ ಲೇಔಟ್ ಗೆ ಬಂದಿದ್ದರು. ರಾತ್ರಿ ಮಗು ಕಿರುಚಾಟ ಕೇಳಿ ಬಂದ ಹಿನ್ನೆಲೆ ಮನೆ ಮಾಲೀಕ ಹೋಗಿ ನೋಡಿದಾಗ ಗಂಡ ಸೋಹನ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ. ಅನುಮಾನ ಬಂದು ಮನೆ ಬಾಗಿಲು ತೆರೆದು ನೋಡಿದಾಗ ಆಕೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.