ಉಡುಪಿ: ಅನಾರೋಗ್ಯ ಸಮಸ್ಯೆಯಿಂದ ನೊಂದುಕೊಂಡ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದವರು ಮೂಡನಿಡಂಬೂರಿನ ಶೋಭಲತಾ (48) ಎಂದು ತಿಳಿದು ಬಂದಿದೆ.
ಬಲಕಿವಿ ತಮಟೆಯಲ್ಲಿ ಸಮಸ್ಯೆ ಇದ್ದುದ್ದರಿಂದ ಮೇ 21ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅನಂತರ ಬಲಕಿವಿ ಬಂದ್ ಇರುವ ಹಾಗೆ ಅನಿಸುತ್ತಿರುವ ಬಗ್ಗೆ ಅವರು ಪತಿಗೆ ತಿಳಿಸಿದ್ದರು. ಇದೇ ವಿಚಾರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಜು.16ರಂದು ರಾತ್ರಿ ಮಲಗಿದ್ದು, ಮರುದಿನ ನೋಡುವಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.