ಬ್ಯಾಂಕಾಕ್: ಥೈಲ್ಯಾಂಡ್ ನಲ್ಲಿ ಬೌದ್ಧ ಸನ್ಯಾಸಿಗಳನ್ನು ಒಳಗೊಂಡ ಅತೀದೊಡ್ಡ ಸುಲಿಗೆ, ಲೈಂಗಿಕ ಹಗರಣ-ಬಹಿರಂಗ ಗೊಂಡಿದ್ದು, ಪ್ರಕರಣ ಸಂಬಂಧ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದು, ಆಕೆಯಿಂದ 102 ಕೋಟಿ ರೂ. ಸುಲಿಗೆ ಹಣ, 80,000ಕ್ಕೂ ಹೆಚ್ಚು ನಗ್ನಚಿತ್ರಗಳು, ವೀಡಿಯೋ ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಮಹಿಳೆಯನ್ನು ವಿಲಾ ವಾನ್ ಎನ್ಸಾವಟ್ ಎಂದು ಗುರುತಿಸಲಾಗಿದೆ.
ಹಲವಾರು ಬೌದ್ಧ ಸನ್ಯಾಸಿಗಳ ಜೊತೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಹಣಕ್ಕಾಗಿ ಅವರನ್ನು ಪೀಡಿಸುತ್ತಿದ್ದಳು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ವಿಲಾವಾನ್ ಅನ್ನು ಆಕೆಯ ಐಷಾರಾಮಿ ಮನೆಯಿಂದ ಬಂಧಿಸಲಾಗಿದ್ದು, ಅಲ್ಲಿ ಪತ್ತೆಯಾದ ಫೋನ್‌ಗಳಲ್ಲಿ 80,000ಕ್ಕೂ ಹೆಚ್ಚು ನಗ್ನಚಿತ್ರಗಳು ದೊರೆತಿವೆ. ಈಕೆ ಕಳೆದ 3 ವರ್ಷಗಳಿಂದ 102 ಕೋಟಿ ರೂ. ಸಂಪಾದನೆ ಮಾಡಿದ್ದಾಳೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಬ್ಯಾಂಕಾಕ್‌ನ ಖ್ಯಾತ ಸನ್ಯಾಸಿಯೊಬ್ಬರು ಜೂನ್‌ನಲ್ಲಿ ಸನ್ಯಾಸತ್ವ ತೊರೆದ ಬೆನ್ನಲ್ಲೇ ಈ ಬಗ್ಗೆ ಥಾಂಲೆಂಡ್‌ನ ತನಿಖಾ ಸಂಸ್ಥೆ ತನಿಖೆ ಆರಂಭಿಸಿತ್ತು. ಈ ಮಹಿಳೆಯ ಬೆದರಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸನ್ಯಾಸಿಯು ಸನ್ಯಾಸತ್ವ ತೊರೆದಿದ್ದರು. ಬಳಿಕ ವಿಲಾವಾನ್ ಈ ಸನ್ಯಾಸಿಯೊಂದಿಗೆ ಮಗು ಪಡೆದಿರುವುದಾಗಿ ಹೇಳಿಕೊಂಡಿದ್ದಳು ಎಂದು ವರದಿಯಾಗಿದೆ.