Home News ಗಾಂಜಾ ಬೆರೆಸಿ ಚಾಕೊಲೇಟ್​​​ ಪಾನ್ ಮಾರಾಟ: ಆರೋಪಿಯ ಬಂಧನ

ಗಾಂಜಾ ಬೆರೆಸಿ ಚಾಕೊಲೇಟ್​​​ ಪಾನ್ ಮಾರಾಟ: ಆರೋಪಿಯ ಬಂಧನ

by admin
0 comments

ದಾವಣಗೆರೆ: ಚಾಕೊಲೇಟ್​​​ ಪಾನ್ ​ಗೆ​​​​​ ಗಾಂಜಾ ಬೆರೆಸಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಿರುವ ನಗರದ ಪೊಲೀಸರು, ಆತನ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿ ಪ್ಯಾರೆಲಾಲ್ ಅಲಿಯಾಸ್ ರಾಜು (38) ಎಂದು ತಿಳಿದು ಬಂದಿದೆ.

ಆರೋಪಿಯು ದಾವಣಗೆರೆ ನಗರದ ರಾಮ್​ ಆ್ಯಂಡ್​ ಕೋ ಸರ್ಕಲ್ ​ನಲ್ಲಿ ರಾಜು ಪಾನ್‌ ಶಾಪ್​ ಹೆಸರಿಲ್ಲಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ಈತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಿಶ್ರಿತ ಚಾಕೋಲೇಟ್​ ಪಾನ್​ ಮಾರಾಟ ಮಾಡುತ್ತಿದ್ದ. ಅಲ್ಲದೇ, ತನ್ನ ಅಪ್ರಾಪ್ತ ಮಗನ ಕೈಯಲ್ಲಿ ಗಾಂಜಾ ಮಿಶ್ರಿತ ಪಾನ್​ ಕೊಟ್ಟು ಕಾಲೇಜುಗಳ ಬಳಿ ಮಾರಾಟ ಮಾಡಿಸುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಈ ದಂಧೆ ನಡೆಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

banner

ರಾಮ್​ ಆ್ಯಂಡ್​ ಕೋ ವೃತ್ತದಲ್ಲಿ ಪಾನ್​ ಶಾಪ್​​ನಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್​ ಪಾನ್ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂದರ್ಭ 160 ಗಾಂಜಾ ಬೆರೆಸಿರುವ ಚಾಕೊಲೇಟ್ ಹಾಗೂ 1,115 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದೇವೆ. ಆರೋಪಿ ಪ್ಯಾರೆಲಾಲ್ ಉತ್ತರಪ್ರದೇಶದ ಅಲಹಾಬಾದ್​ ನ ನಿವಾಸಿ. ಇಲ್ಲಿ ನಾಲ್ಕು ವರ್ಷಗಳಿಂದ ಪಾನ್​ ಶಾಪ್​ ನಡೆಸುತ್ತಿದ್ದ ಎಂದು ಎಸ್ ಪಿ ತಿಳಿಸಿದ್ದಾರೆ.

“ಗಾಂಜಾ ಮಿಶ್ರಿತ ‌ಭೋಲೆ ಚಾಕೊಲೇಟ್ ಹೆಸರಿನ ಪಾನ್ ​​ಅನ್ನು ಉತ್ತರ ಪ್ರದೇಶದಲ್ಲಿ ಕೇವಲ 1-2 ರೂಪಾಯಿಗೆ ಮಾರಲಾಗುತ್ತದೆ. ಆದರೆ, ಇಲ್ಲಿ ಅದನ್ನು 50–60 ರೂಪಾಯಿಗೆ ಆರೋಪಿ ಮಾರಾಟ ಮಾಡುತ್ತಿದ್ದ. ಈ ಚಾಕೊಲೇಟ್​ ಅನ್ನು ಮಕ್ಕಳು ಜ್ಯೂಸ್​, ಹಾಲಿನಲ್ಲಿ ತೆಗೆದುಕೊಳ್ಳುತ್ತಿದ್ದರು. ತನ್ನ ಮಗನನ್ನು ಬಳಸಿ ಈ ಕೃತ್ಯ ಎಸಗುತ್ತಿದ್ದ. ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ” ಎಂದು ಎಸ್​ ಪಿ ಹೇಳಿದ್ದಾರೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.