ಕುಂದಾಪುರ: ಕುಂದಾಪುರ ಸಂತೆ ಮಾರುಕಟ್ಟೆ ಬಳಿ ಜು. 14ರ ಮಧ್ಯರಾತ್ರಿ ಅಂಗಡಿಯ ಶಟರ್ ಬಾಗಿಲು ಒಡೆದು, 95 ಸಾವಿರ ರೂ. ಮೌಲ್ಯದ ತಾಮ್ರದ ವಯರ್, ಹಿತ್ತಾಳೆಯ ವಸ್ತುಗಳನ್ನು ಕಳ್ಳತನಗೈದಿದ್ದ ನಾಲ್ವರನ್ನು ಉಡುಪಿಯ ಸಂತೆಕಟ್ಟೆಯಲ್ಲಿ ಕುಂದಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರು ಮಂಗಳೂರಿನ ಸರ್ಫರಾಜ್ (33), ಜಾಕೀರ್ (36), ಮುಹಮ್ಮದ್ ಅಲ್ಪಾಜ್ (26) ಹಾಗೂ ಮಂಜನಾಡಿಯ ಮುಹಮ್ಮದ್ ರಿಯಾಜ್ (44) ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ 50 ಕೆಜಿ ತೂಕದ ತಾಮ್ರದ ಸರಿಗೆ, 34 ಕೆಜಿ ತೂಕದ ತಾಮ್ರದ ಸರಿಗೆ, 64 ಕೆಜಿ ತೂಕದ ಹಿತ್ತಾಳೆಯ ವಸ್ತು, 20 ಕೆಜಿ ತೂಕದ ಅಲ್ಯೂಮಿನಿಯಂ ವಸ್ತು, ಫ್ರಿಡ್ಜ್ ಕಂಪ್ರಸರ್, 45 ಹಳೆಯ ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.