12
ಬೆಳ್ತಂಗಡಿ: ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ತಿರುವಿನಲ್ಲಿ ಉಜಿರೆ ಕಡೆ ಚಲಿಸುತ್ತಿದ್ದ ಸರಕು ಸಾಗಾಟ ವಾಹನ ಚರಂಡಿ ಬದಿ ಹಾಕಿರುವ ಮಣ್ಣಿನಲ್ಲಿ ಸಿಲುಕಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಹೆದ್ದಾರಿ ಅಭಿವೃದ್ಧಿ, ಪೈಪ್ ಲೈನ್, ಭೂಗತ ಕೇಬಲ್ ಅಳವಡಿಕೆ ಇತ್ಯಾದಿ ಗೆಂದು ರಸ್ತೆ ಬದಿ ಹಾಕಿರುವ ಮಣ್ಣು ಮಳೆಗೆ ಸಡಿಲಗೊಂಡಿದ್ದು ಸರಕು ಸಾಗಾಟ ವಾಹನ ರಸ್ತೆ ಬದಿಗೆ ಸರಿದ ಪರಿಣಾಮ ಮಣ್ಣಿನಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ.
ಬೇರೆ ವಾಹನದ ಸಹಾಯದಿಂದ ವಾಹನವನ್ನು ಮೇಲೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ತಿಳಿದು ಬಂದಿದೆ.