9
ಉಡುಪಿ: ಮೆದುಳಿನ ಆಘಾತಕ್ಕೆ ಒಳಗಾಗಿದ್ದ ಮತ್ತು ರಕ್ತದೊತ್ತಡ, ಸಕ್ಕರೆ ಕಾಯಿಲೆಗೆ ಔಷಧ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರು ಕಟಪಾಡಿ ಏಣೆಗುಡ್ಡೆ ನಿವಾಸಿ ಸುಧಾಕರ (60) ಅವರು ಎಂದು ತಿಳಿದು ಬಂದಿದೆ.
ಸುಧಾಕರ ಅವರ ಪುತ್ರ ಸೂರಜ್ ಕೊರಂಗ್ರಪಾಡಿಯ ಸೈಂಟ್ ಮೇರಿಸ್ ಆಟೋ ವರ್ಕ್ಸಲ್ಲಿ ಕೆಲಸ ಮಾಡಿಕೊಂಡಿದ್ದು, ಜು.16ರ ಮಧ್ಯಾಹ್ನದ ಹೊತ್ತಿಗೆ ತಂದೆಯ ಅಸೌಖ್ಯದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.