18
ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಆಲಂಪಾಡಿಯಲ್ಲಿ ಸಹೋದರರೊಳಗೆ ನಡೆದ ಜಗಳದಲ್ಲಿ ಓರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡವರು ರಾಜಶೇಖರ್ (37) ಎಂದು ತಿಳಿದು ಬಂದಿದೆ.
ರಾಜಶೇಖರ್ ತನ್ನ ಮನೆಯಲ್ಲಿದ್ದಾಗ ಸಹೋದರರಾದ ಮನೋಜ್ ಕುಮಾರ್ ಮತ್ತು ಜಯರಾಜ್ ಅವರು ಅವಾಚ್ಯ ಪದಗಳಿಂದ ಬೈದು ಕತ್ತಿಯಿಂದ ಕಡಿದು ಗಾಯವನ್ನುಂಟು ಮಾಡಿದ್ದಾರೆ ಎಂದು ದೂರಲಾಗಿದೆ.
ರಾಜಶೇಖರ್ ಅವರನ್ನು ಮತ್ತೋರ್ವ ಸಹೋದರ ಬಾಲಕೃಷ್ಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.