ಕೊಲ್ಲೂರು: ಬೆಳ್ಳಾಲ ಗ್ರಾಮದ ನಿವಾಸಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ರಾಮಸ್ವಾಮಿ (60) ಎಂದು ಗುರುತಿಸಲಾಗಿದೆ.
ಮೂಲತಃ ಭದ್ರಾವತಿಯ ಅರಳ ಹಳ್ಳಿಯವರಾದ ರಾಮಸ್ವಾಮಿ ಏಕಾಂಗಿಯಾಗಿದ್ದು, ಹಲವು ವರ್ಷ ಗಳಿಂದ ಬೆಳ್ಳಾಲ ಪರಿಸರದ ಮನೆಗಳಲ್ಲಿ ಕೂಲಿ ಕೆಲಸ ಮಾಡುತ್ತ ಹೋದ ಮನೆಗಳಲ್ಲಿಯೇ ಇದ್ದು ಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಜು. 13ರಂದು ಭಾಸ್ಕರ ಅವರ ಅಂಗಡಿಗೆ ಬಂದು ತಿಂಡಿ ತೆಗದುಕೊಂಡು ಹೋಗಿದ್ದರು. ಬಳಿಕ ಅವರನ್ನು ಕಂಡವರು ಇಲ್ಲ. ಗುರುವಾರ ಮೂಡಮುಂದ ಕಾಳಿಂಗ ಜಡ್ಡು ನಿವಾಸಿ ದಿ| ವಿನೋದ್ ಕುಮಾರ್ ಅವರ ಪಾಳು ಬಿದ್ದ ಅಕ್ಕಿ ಮಿಲ್ ಶೆಡ್‌ನಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮಲಗಿದಲ್ಲೇ ಅವರು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.