36
ಕಟಪಾಡಿ: ಉದ್ಯಾವರ ಕೊರಂಗ್ರಪಾಡಿಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತಪಟ್ಟವರು ಕಟಪಾಡಿ ಏಣಗುಡ್ಡೆಯ ನಿವಾಸಿ ಸುಧಾಕರ ಆಚಾರ್ಯ (60) ಎಂದು ತಿಳಿದು ಬಂದಿದೆ.
ಸುಮಾರು 45 ವರ್ಷಗಳಿಂದ ಮೆಕ್ಯಾನಿಕ್ ಆಗಿದ್ದು, ಕಟಪಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ಕೆಲವು ವರ್ಷಗಳ ಕಾಲ ದ್ವಿಚಕ್ರ ವಾಹನ ದುರಸ್ತಿಯ ಗ್ಯಾರೇಜ್ ಹೊಂದಿದ್ದರು. ಪ್ರಸ್ತುತ ಕೊರಂಗ್ರಪಾಡಿಯ ಸೈಂಟ್ ಮೇರಿಸ್ ಆಟೋ ಇಲೆಕ್ಟಿಕಲ್ಸ್ ಮತ್ತು ಆಟೋ ವರ್ಕ್ಸ್ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಬುಧವಾರ ಮಧ್ಯಾಹ್ನದ ವೇಳೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.