Home News ಭಾರೀ ಮಳೆಗೆ ಮನೆ ಕುಸಿತ: ಮಗು ಮೃತ್ಯು, ನಾಲ್ವರಿಗೆ ಗಂಭೀರ ಗಾಯ

ಭಾರೀ ಮಳೆಗೆ ಮನೆ ಕುಸಿತ: ಮಗು ಮೃತ್ಯು, ನಾಲ್ವರಿಗೆ ಗಂಭೀರ ಗಾಯ

by admin
0 comments

ಗಂಗಾವತಿ: ಧಾರಕಾರ ಸುರಿಯುತ್ತಿರುವ ನಿರಂತರ ಮಳೆ ಹಿನ್ನೆಲೆ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು 2 ವರ್ಷದ ಹೆಣ್ಣು ಮಗು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಮೃತಪಟ್ಟ ಹೆಣ್ಣು ಮಗು ಹೆಬ್ಬಾಳ ಗ್ರಾಮದ ಪ್ರಶಾಂತಿ (2) ಎಂದು ತಿಳಿದು ಬಂದಿದೆ.

ಮೃತ ಮಗುವಿನ ತಾಯಿ ಹನುಮಂತಿ (28),ಕುಟುಂಬ ಸದಸ್ಯರಾದ ದುರಗಮ್ಮ(65), ಭೀಮಮ್ಮ (19), ಹುಸೇನಪ್ಪ (46), ಫಕೀರಪ್ಪ ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹಾಗೂ ತಹಶೀಲ್ದಾರ್ ಯು.ನಾಗರಾಜ್, ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಮಿನಿ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

banner

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles