14
ಹುಣಸೂರು: ಹುಣಸೂರು-ರತ್ನಪುರಿ ರಸ್ತೆಯ ಕೊನ್ನಾರಿ ಹಳ್ಳದ ಬಳಿಯಲ್ಲಿ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತ ಯುವಕ ತಾಲೂಕಿನ ಕೆಂಚನಕೆರೆ ಹೊಸಕೋಟೆಯ ಸ್ವಾಮಿಯವರ ಪುತ್ರ ಅವಿವಾಹಿತ ವಿಕಾಸ್(22) ಎಂದು ತಿಳಿದು ಬಂದಿದೆ.
ಹುಣಸೂರು ಕಡೆಯಿಂದ ಸ್ವಗ್ರಾಮಕ್ಕೆ ಬೈಕಿನಲ್ಲಿ ವಿಕಾಸ್ ತೆರಳುತ್ತಿದ್ದ ವೇಳೆ ರತ್ಪುರಿ ಕಡೆಯಿಂದ ಬಂದ ಗೂಡ್ಸ್ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾತನನ್ನು ಮೈಸೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.