16
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಮಜಿಕುಡೆ ಎಂಬಲ್ಲಿ ನಿಲ್ಲಿಸಿದ್ದ ಓಮ್ನಿ ಕಾರೊಂದು ಬೆಂಕಿ ಹೊತ್ತಿಕೊಂಡು ಉರಿದ ಘಟನೆ ನಡೆದಿದೆ.
ಮಜಿಕುಡೆ ನಿವಾಸಿ ವಿಶ್ವನಾಥ ಗೌಡ ಅವರು ತನ್ನ ಕಾರನ್ನು ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದರು.
ಜು.16ರಂದು ಬೆಳಗ್ಗೆ ಸುಟ್ಟ ವಾಸನೆ ಬಂದಾಗ ಅವರು ಬಾಗಿಲು ತೆರೆದು ನೋಡಿದಾಗ ಕಾರು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು ಕಂಡು ಬಂದಿದೆ.
ಕೂಡಲೇ ಅವರು ನೀರು ಹಾಕಿ ಬೆಂಕಿ ನಂದಿಸಿದರೂ ಕಾರು ಭಾಗಶಃ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.