25
ಬೆಳ್ಮಣ್: ಬಾಂಗ್ಲಾ ದೇಶದಲ್ಲಿ ಬೆಂಗಳೂರು ಮೂಲದ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೋರ್ವರು ಮೆದುಳಿನ ರಕ್ತಸ್ರಾವದಿಂದ ಜು. 15ರಂದು ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿ ನಿತೀಶ್ ಹಾಳೆಕಟ್ಟೆಯ ದಿ. ಸುಂದರ ಕೋಟ್ಯಾನ್ ಹಾಗೂ ವಿಮಲಾ ದಂಪತಿಯ ಪುತ್ರ ನಂದಳಿಕೆಯ ನಿತೀಶ್ ಎನ್(46) ಎಂದು ತಿಳಿದು ಬಂದಿದೆ.
ನಿತೀಶ್ ಒಂದು ಕಣ್ಣಿನ ದೃಷ್ಟಿಯ ಬಗ್ಗೆ ತೊಂದರೆ ಎದುರಿಸುತ್ತಿದ್ದು ತಪಾಸಣೆಗಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದು, ತಪಾಸಣೆ ಸಂದರ್ಭ ತೊಂದರೆ ಉಂಟಾಗಿ ಆ್ಯಂಜಿಯೋಪ್ಲಾಸ್ಟ್ ಮಾಡಲಾಗಿತ್ತು. ಬಳಿಕ ಮೆದುಳಿನ ಶಸ್ತ್ರ ಚಿಕಿತ್ಸೆಯ ಅಗತ್ಯವೆಂದು ಅದನ್ನೂ ಮಾಡಿದರೂ ರಕ್ತಸ್ರಾವ ನಿಲ್ಲದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ