Home News ಉಡುಪಿ: ಯುವಕ ಆತ್ಮಹತ್ಯೆಗೆ ಶರಣು

ಉಡುಪಿ: ಯುವಕ ಆತ್ಮಹತ್ಯೆಗೆ ಶರಣು

by admin
0 comments

ಉಡುಪಿ: ಮದ್ಯವ್ಯಸನಿಯಾಗಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವಕ ನಿಟ್ಟೂರಿನ ದೀಕ್ಷಿತ್ ಆರ್. (26) ಎಂದು ತಿಳಿದು ಬಂದಿದೆ.

ಅವರು 10ನೇ ತರಗತಿ ವಿದ್ಯಾಭ್ಯಾಸದ ಬಳಿಕ ಪೈಂಟಿಂಗ್ ಕೆಲಸವನ್ನು ನಿಟ್ಟೂರು ಪರಿಸರದಲ್ಲಿ ಮಾಡಿಕೊಂಡಿದ್ದರು. 2-3 ವರ್ಷಗಳಿಂದ ಮದ್ಯವ್ಯಸನಿಯಾಗಿದ್ದು, 3-4 ತಿಂಗಳಿನಿಂದ ಕುಡಿತ ಬಿಟ್ಟಿದ್ದರು. ಜು. 14ರಂದು ರಾತ್ರಿ ಮತ್ತೆ ಮದ್ಯ ಸೇವಿಸಿ ಬಂದು ವಿನಾಕಾರಣ ಮನೆಯಲ್ಲಿ ಗಲಾಟೆ ಮಾಡಿದ್ದರು. ರಾತ್ರಿ 1 ಗಂಟೆಯವರೆಗೂ ಮನೆಯಲ್ಲಿಯೇ ಇದ್ದು ಅನಂತರ ಹೊರಗಡೆ ಹೋಗಿದ್ದರು. ಬೆಳಗ್ಗೆ ಹುಡುಕಾಡಿದಾಗ ಮನೆಯ ಪಕ್ಕದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೇಲ್ಬಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

banner

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.