24
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಗಾಳಿ-ಮಳೆಗೆ ಮರದ ಕೊಂಬೆ ರಸ್ತೆಗೆ ಬಿದ್ದಿದ್ದು, ಕಾರೊಂದು ಅದರಡಿಯಲ್ಲಿ ಸಿಲುಕಿದ ಘಟನೆ ಬುಧವಾರ ಸಂಭವಿಸಿದೆ.
ಭಾರೀ ಗಾಳಿಗೆ ಬೃಹತ್ ಮರದ ಕೊಂಬೆ ರಸ್ತೆಗೆ ಮುರಿದು ಬಿದ್ದಿದೆ. ಈ ಸಂದರ್ಭ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ಅದರಡಿ ಸಿಲುಕಿಕೊಂಡಿತ್ತು. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಕೆಲ ಕಾಲ ರಸ್ತೆ ತಡೆ ಉಂಟಾಯಿತು. ಸುಬ್ರಹ್ಮಣ್ಯ ಪೊಲೀಸರು, ಮೆಸ್ಕಾಂ ಸಿಬ್ಬಂದಿ, ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಮರದ ಕೊಂಬೆಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದ್ದಾರೆ ಎಂದು ತಿಳಿದು ಬಂದಿದೆ.