57
ಮಲ್ಪೆ: ಉಡುಪಿಯ ಖಾಸಗಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಯೋರ್ವ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತ ಬಾಲಕ ತೆಂಕನಿಡಿಯೂರು ಗ್ರಾಮದ ತೊಟ್ಟಂ ಬಳಿಯ ಅಶ್ವಿನ್ ಜೀವನ್ ಫ್ರಾನ್ಸಿಸ್ ಅವರ ಪುತ್ರ ಉಡುಪಿಯ ಖಾಸಗಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ರ್ಯಾನ್ಸ್ ಕ್ಯಾಥಲ್ ಡಿ’ಸೋಜಾ (11) ಎಂದು ತಿಳಿದು ಬಂದಿದೆ.
ಜು. 14ರಂದು ರಾತ್ರಿ ಸ್ನಾನ ಮಾಡಲು ಹೊರಟ ಬಾಲಕ ಬಳಿಕ ಕೊಠಡಿಯ ಮಂಚದ ಮೇಲೆ ಮಲಗಿದ್ದು ಮಾತನಾಡುತ್ತಿರಲಿಲ್ಲ. ಬಾಯಿಯಲ್ಲಿ ಜೊಲ್ಲು ಹೊರಗೆ ಬರುತ್ತಿತ್ತು. ಕೂಡಲೇ ಆತನನ್ನು ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕ ಆದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.