32
ಹುಬ್ಬಳ್ಳಿ: ಕಳೆದ ವಾರ ಧಾರವಾಡದ ಕಂಠಿ ಗಲ್ಲಿಯಲ್ಲಿ ಹಾಡಹಗಲೇ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ರಾಘವೇಂದ್ರ ಗಾಯಕವಾಡ ಎಂದು ತಿಳಿದು ಬಂದಿದೆ.
ಮಲಿಕ್ ಎಂಬಾತ ರಾಘವೇಂದ್ರನಿಗೆ ಚಾಕುವಿನಿಂದ ಇರಿದಿದ್ದು ಗಂಭೀರ ಗಾಯಗೊಂಡ ಈತನಿಗೆ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬಲವಾದ ಇರಿತವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.