ಲಂಡನ್: ಲಂಡನ್ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿರುವ ಘಟನೆ ವರದಿಯಾಗಿದೆ.
ವೈದ್ಯಕೀಯ ಸಾರಿಗೆ ಒದಗಿಸುತ್ತಿದ್ದ ಜೆಟ್ ಬೀಚ್‌ಕ್ರಾಫ್ಟ್ ಬಿ200 ಸೂಪರ್ ಕಿಂಗ್ ವಿಮಾನವು ಸುಮಾರು 12 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ವರದಿ ತಿಳಿಸಿದೆ.
ವಿಮಾನವು ಲಂಡನ್ ನಿಂದ ನೆದರ್ಲ್ಯಾಂಡ್ ಗೆ ಹಾರಾಟ ನಡೆಸಿತ್ತು. ಈ ಸಂದರ್ಭ ವಿಮಾನ ನಿಲ್ದಾಣದ ಬಳಿಯೇ ಪತನಗೊಂಡಿದೆ ಎಂದು ವರದಿ ತಿಳಿಸಿದೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಬಾನೆತ್ತರಕ್ಕೆ ಆವರಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಘಟನೆ ಬಳಿಕ ವಿಮಾನ ನಿಲ್ದಾಣದಿಂದ ಕೆಲವು ಹೊತ್ತು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು ಎಂದು ವರದಿ ತಿಳಿಸಿದೆ.