23
ಉತ್ತರ ಪ್ರದೇಶ: ಉತ್ತರ ಪ್ರದೇಶದ ಉನ್ನಾವೋದಲ್ಲಿ ಪತ್ನಿಯೋರ್ವಳು ತನ್ನ ಗಂಡನಿಗೆ ಮದ್ಯ ಕುಡಿಸಿ ಪ್ರಿಯಕರನ ಜೊತೆ ಸೇರಿ ಗಂಡನ ತಲೆ ಕತ್ತರಿಸಿ ಕೊಲೆಗೈದ ಘಟನೆ ವರದಿಯಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಇಮ್ರಾನ್ ಹಾಗೂ ಕೊಲೆಗೈದ ಪತ್ನಿ ಶೀಬಾ, ಪ್ರಿಯಕರ ಫರ್ಮಾನ್ ಎಂದು ಗುರುತಿಸಲಾಗಿದೆ.
ಪತಿಯ ಶಿರಚ್ಛೇದ ಮಾಡಿದ ನಂತರ ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ಶವವನ್ನು ವಿಲೇವಾರಿ ಮಾಡಿದ್ದಾಳೆ ಎಂದು ವರದಿ ತಿಳಿಸಿದೆ.
ಕಳೆದ ಮೂರು ವರ್ಷದಿಂದ ಶೀಬಾ ಹಾಗೂ ಫರ್ಮಾನ್ ಅನೈತಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
ಇಮ್ರಾನ್ ಗೆ ಮದ್ಯ ಕುಡಿಸಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ತಲೆ ಕತ್ತರಿಸಿ ಶವವನ್ನ ಚರಂಡಿಯಲ್ಲಿ ಎಸೆದಿದ್ದರು. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.