ರಾಯಚೂರು: ರಾಯಚೂರಿನ ಗುರ್ಜಾಪುರ ಸೇತುವೆ ಕಂ ಬ್ಯಾರೇಜ್ ಬಳಿ ಪತ್ನಿಯೇ ಪತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಪತಿಯ ಜೊತೆ ಬೈಕ್ ನಲ್ಲಿ ಬಂದಿದ್ದ ಪತ್ನಿ ಖತರ್ನಾಕ್ ಸಂಚು ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳುವ ರೀತಿ ನಾಟಕ ಮಾಡಿದ ಪತ್ನಿ ಮೊದಲು ತಾನು ಫೋಟೋ ತೆಗೆಸಿಕೊಂಡಿದ್ದಾಳೆ.
ಬಳಿಕ ಪತಿಯನ್ನು ಸೇತುವೆ ತುದಿಗೆ ನಿಲ್ಲಿಸಿ ತಳ್ಳಿದ್ದಾಳೆ. ನದಿಯ ಮಧ್ಯೆ ಈಜಿಕೊಂಡು ಬಂಡೆಯೊಂದರ ಮೇಲೆ ಪತಿ ಕುಳಿತುಕೊಂಡಿದ್ದಾನೆ. ಆತನ ಕಿರುಚಾಟ ಕೇಳಿದ ಅಕ್ಕಪಕ್ಕದಲ್ಲಿದ್ದವರು ಆಗಮಿಸಿ ರಕ್ಷಣೆ ಮಾಡಿದ್ದಾರೆ.
ಸುಮಾರು 2 ಗಂಟೆಗಳ ಕಾಲ ನದಿಯಲ್ಲಿದ್ದ ಪತಿಯನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರು ಶಕ್ತಿನಗರದ ದಂಪತಿ ನಡುವೆ ಗಲಾಟೆಯಾಗಿದ್ದು, ಪತಿಯನ್ನು ಕೊಲೆ ಮಾಡಲು ಸಂಚು ಮಾಡಿದ್ದ ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ನದಿಗೆ ನೂಕಿದ್ದಾಳೆ ಎಂದು ಹೇಳಲಾಗಿದೆ.