61
ಕಾಸರಗೋಡು: 250 ವಾಟ್ಸ್‌ಗಿಂತ ಕೆಳಗಿನ ಮೋಟಾರು ಹೊಂದಿದ ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಿದ ವಿದ್ಯಾರ್ಥಿಯ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರಪಡಿಸಿದ ಸಿವಿಲ್ ಪೊಲೀಸ್ ಆಫೀಸರ್‌ನನ್ನು ಅಮಾನತುಮಾಡಲಾಗಿದೆ.
ಕಾಸರಗೋಡು ಎ.ಆರ್.ಕ್ಯಾಂಪಿನ ಸಿವಿಲ್ ಪೊಲೀಸ್ ಆಫೀಸರ್ ಕೆ.ಸಜೇಶ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯ್ ಭಾರತ್ ರೆಡ್ಡಿ ಅಮಾನತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಕೂಟರ್ ವಶಪಡಿಸಿದ ದೃಶ್ಯ ವನ್ನು ಸಜೇಶ್ ರೀಲ್ಸ್ ಮಾಡಿ ಪ್ರಚಾರಪಡಿಸಿದ್ದ. ಇದರಿಂದ ಬಾಲಕನಿಗೆ ಹೊರಗೆ ಹೋಗಲು ಅಸಾಧ್ಯ ಸ್ಥಿತಿ ಉಂಟಾಗಿರುವುದಾಗಿ ಹೆತ್ತವರು ದೂರಿದ್ದರು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆ ಸಿವಿಲ್ ಪೊಲೀಸ್ ಆಫೀಸರ್ ಕೆ.ಸಜೇಶ್‌ನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.