ಮಂಜೇಶ್ವರ: ಹಾಡಹಗಲೇ ಮನೆಗೆ ನುಗ್ಗಿ ಎರಡೂವರೆ ಪವನ್ ಚಿನ್ನಾಭರಣ ಕಳವುಗೈದ ಪ್ರಕರಣ ಸಂಬಂಧ ಉತ್ತರಪ್ರದೇಶ ಮೂಲದ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಉತ್ತರಪ್ರದೇಶದ ಗಣಪತ್ (28) ಎಂದು ತಿಳಿದು ಬಂದಿದೆ.
ಮಂಜೇಶ್ವರ ಕಣ್ವತೀರ್ಥದಲ್ಲಿ ಎರಡು ದಿನಗಳ ಹಿಂದೆ ಕಳವು ನಡೆದಿತ್ತು. ಬಾಡಿಗೆ ಮನೆಯಲ್ಲಿ ಉತ್ತರಪ್ರದೇಶದ ಮೂಲದ ಕೂಲಿ ಕಾರ್ಮಿಕ ಲೋಕೇಶ್ ರವರ ಬಾಡಿಗೆ ಮನೆಯಲ್ಲಿ ಕೃತ್ಯ ನಡೆದಿತ್ತು. ಬುಧವಾರದಂದು ಲೋಕೇಶ್ ಹಾಗೂ ಮನೆಯವರು ಮಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿತ್ತು. ಕಿಟಿಕಿ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಕಳವು ಮಾಡಲಾಗಿತ್ತು .
ಈ ಕುರಿತು ಮಂಜೇಶ್ವರ ಠಾಣಾ ಪೊಲೀಸರು ತನಿಖೆ ನಡೆಸಿ ಬೆರಳಚ್ಚು ತಜ್ಞರು ಮಾಹಿತಿ ಕಲೆಹಾಕಿದ್ದರು. ಗಣಪತ್ ಬಗ್ಗೆ ಸಂಶಯಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಮಂಜೇಶ್ವರ: ಮನೆಗೆ ನುಗ್ಗಿ ಚಿನ್ನಾಭರಣ ಕಳವು; ಆರೋಪಿಯ ಬಂಧನ