17
ಬಂಟ್ವಾಳ: ಕಾರೊಂದು ಡಿಕ್ಕಿಯಾಗಿ ರಸ್ತೆ ದಾಟಲು ನಿಂತಿದ್ದ ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಮುಡಿಪು-ಕುಕ್ಕಾಜೆ ರಸ್ತೆಯ ಇರಾ ಜಂಕ್ಷನ್‌ನಲ್ಲಿ ಸಂಭವಿಸಿದೆ.
ಗಾಯಗೊಂಡವರು ಇರಾ ನಿವಾಸಿ ಚಂದ್ರಶೇಖರ್ ಎಂದು ತಿಳಿದು ಬಂದಿದೆ.
ಅವರು ರಸ್ತೆ ದಾಟಲು ಇರಾ ಜಂಕ್ಷನ್‌ನಲ್ಲಿ ನಿಂತಿದ್ದಾಗ ಮುಡಿಪು ಕಡೆಯಿಂದ ಆಗಮಿಸಿದ ಕಾರು ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.