Home News ಎರಡು ವಿಮಾನಗಳು ಪರಸ್ಪರ ಡಿಕ್ಕಿ: ಭಾರತೀಯ ಮೂಲದ ವಿದ್ಯಾರ್ಥಿ ಸಹಿತ ಇಬ್ಬರು ಮೃತ್ಯು

ಎರಡು ವಿಮಾನಗಳು ಪರಸ್ಪರ ಡಿಕ್ಕಿ: ಭಾರತೀಯ ಮೂಲದ ವಿದ್ಯಾರ್ಥಿ ಸಹಿತ ಇಬ್ಬರು ಮೃತ್ಯು

by admin
0 comments

ಕೆನಡಾ: ಕೆನಡಾದಲ್ಲಿ ತರಬೇತಿ ವಿಮಾನಗಳ ಹಾರಾಟದ ವೇಳೆ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ (ಪೈಲೆಟ್) ಸೇರಿ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತರ ಪೈಕಿ ಓರ್ವ ಭಾರತೀಯ ಮೂಲದ ಶ್ರೀಹರಿ ಸುಕೇಶ್ ಎಂದು ತಿಳಿದುಬಂದಿದೆ.

ಶ್ರೀಹರಿ ಸುಕೇಶ್ ಮೂಲತಃ ಕೊಚ್ಚಿ ಮೂಲದವರಾಗಿದ್ದು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನೋರ್ವ ಮೃತ ಪೈಲೆಟ್ ಕೆನಡಾದ ಪ್ರಜೆ ಸವನ್ನಾ ಎಂದು ಗುರುತಿಸಲಾಗಿದೆ.

ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಸ್ಟೈನ್‌ಬಾಚ್ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

banner

ತರಬೇತಿ ಹಾರಾಟದ ಸಮಯದಲ್ಲಿ ಇಬ್ಬರೂ ಪೈಲೆಟ್ ಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಹಾರ್ಟ್ಸ್ ಏರ್ ಪೈಲಟ್ ತರಬೇತಿ ಶಾಲೆಯ ಸಿಂಗಲ್‌ ಎಂಜಿನ್ ಹೊಂದಿರುವ ಸೆಸ್ನಾ 152 ಮತ್ತು ಸೆಸ್ನಾ 172 ವಿಮಾನಗಳನ್ನು ತರಬೇತಿಗೆ ಬಳಸಲಾಗಿದ್ದು ಢಿಕ್ಕಿ ಹೊಡೆದ ಸಂದರ್ಭ ಎರಡೂ ವಿಮಾನಗಳು ಬೆಂಕಿಯುಂಡೆಯಾಗಿ ಕೆಳಗುರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಳಿಕ ಹಾರ್ಟ್ಸ್ ಏರ್‌ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.