ಶಿವಮೊಗ್ಗ: ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆ ಇ-ಬ್ಲಾಕ್ ನಲ್ಲಿ ಸ್ನೇಹಿತನ ಮನೆಗೆ ಎಣ್ಣೆ ಪಾರ್ಟಿಗೆ ಹೋದ ಯುವಕನ ಬರ್ಬರ ಹತ್ಯೆಯಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕೊಲೆಯಾದ ಯುವಕ ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಎಂದು ತಿಳಿದು ಬಂದಿದೆ.
ಕೊಲೆಗೈದ ಆರೋಪಿ ಶಿವಕುಮಾರ್ (49) ಎಂದು ತಿಳಿದು ಬಂದಿದೆ.
ಪವನ್ ಗುರುವಾರ ತಡರಾತ್ರಿ ಸ್ನೇಹಿತನ ಮನೆಗೆ ಎಣ್ಣೆ ಪಾರ್ಟಿಗೆಂದು ಬೊಮ್ಮನಕಟ್ಟೆ ಇ-ಬ್ಲಾಕ್ ನಲ್ಲಿರುವ ಶಿವಕುಮಾರ್ ಮನೆಗೆ ತೆರಳಿದ್ದಾನೆ. ಇದಾದ ಬಳಿಕ ಪಾರ್ಟಿ ನಡುವೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಶಿವಕುಮಾರ್ ಮನೆಯಲ್ಲೇ ಪವನ್ ನನ್ನು ಕೊಲೆಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸ್ಥಳಕ್ಕೆ ವಿನೋಬನಗರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್, ಬೆರಳಚ್ಚು ಮತ್ತು ಫಾರೆನ್ಸಿಕ್ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶಿವಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.