Home News ಮಗು ತನ್ನದಲ್ಲವೆಂಬ ಶಂಕೆ: ಪ್ರೇಯಸಿ, ಮಗುವನ್ನು ಕತ್ತು ಸೀಳಿ ಬರ್ಬರ ಹತ್ಯೆ

ಮಗು ತನ್ನದಲ್ಲವೆಂಬ ಶಂಕೆ: ಪ್ರೇಯಸಿ, ಮಗುವನ್ನು ಕತ್ತು ಸೀಳಿ ಬರ್ಬರ ಹತ್ಯೆ

by admin
0 comments

ನವದೆಹಲಿ: ದೆಹಲಿಯ ಮಜ್ನುಕಾ ತಿಲ್ಲಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಹಾಗೂ ಆರು ತಿಂಗಳ ಮಗುವನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಉತ್ತರಾಖಂಡ ಮೂಲದ ನಿಖಿಲ್ ಎಂಬ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳವಾರ ನಿಖಿಲ್ ಸೋನಾಲ್ ಹಾಗೂ ಆಕೆಯ 6 ತಿಂಗಳ ಮಗುವನ್ನು ಹತ್ಯೆ ಮಾಡಿದ್ದ.

ಈ ಕೊಲೆಯನ್ನು ಸರ್ಜಿಕಲ್ ಬ್ಲೇಡ್​​ನಿಂದ ನಡೆಸಲಾಗಿದೆ, ನಿಖಿಲ್ ನಂತರ ಸ್ಥಳದಿಂದ ಪರಾರಿಯಾಗಿದ್ದ. ಆತ್ಮಹತ್ಯೆಗೂ ಯತ್ನಿಸಿದ್ದ ಎಂಬುದು ತಿಳಿದುಬಂದಿದೆ. ಕೊನೆಗೆ ಆತನನ್ನು ಹಲ್ದ್ವಾನಿಯಲ್ಲಿರುವ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ನಿಖಿಲ್ ಮತ್ತು ಸೋನಾಲ್ 2023ರಲ್ಲಿ ಹಲ್ದ್ವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಆ ವರ್ಷದ ಕೊನೆಯಲ್ಲಿ ಆಕೆ ಗರ್ಭಿಣಿಯಾದಳು. ಪೊಲೀಸರ ಪ್ರಕಾರ ಆಗ ಅವಿವಾಹಿತರಾಗಿದ್ದಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಇಬ್ಬರಿಗೂ ಮಗುವನ್ನು ಸಾಕಲು ಇಷ್ಟವಿರಲಿಲ್ಲ. ಆರಂಭದಲ್ಲಿ ಗರ್ಭಪಾತ ಬಯಸಿದ್ದರೂ ಅದು ಸಾಧ್ಯವಾಗಲಿಲ್ಲ, 2024ರಲ್ಲಿ ಮಗು ಜನಿಸಿತ್ತು.

banner

ನಂತರ ದಂಪತಿ ಮಗುವನ್ನು ಅಲ್ಮೋರಾದಲ್ಲಿ ಅಪರಿಚಿತ ವ್ಯಕ್ತಿಗೆ 2 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಹಣದಿಂದ ಅವರು ದೆಹಲಿಗೆ ಸ್ಥಳಾಂತರಗೊಂಡಿದ್ದರು. ಆರಂಭದಲ್ಲಿ ವಜೀರಾಬಾದ್​​ನಲ್ಲಿ ವಾಸಿಸುತ್ತಿದ್ದರು. ನಂತರ ಮಜ್ನುಕಾ ತಿಲ್ಲಾಗೆ ತೆರಳಿದ್ದರು. ದೆಹಲಿಯಲ್ಲಿರುವಾಗ ರಶ್ಮಿ ಎಂಬವರು ಪರಿಚಯವಾಗಿದ್ದರು. ಆಗಾಗ ಅವರ ಮನೆಗೆ ಹೋಗಿಬರುತ್ತಿದ್ದರು. ನಿಖಿಲ್ ಜೊತೆ ಜಗಳಾವಾದಾಗಲೆಲ್ಲಾ ಆಕೆ ಅವರ ಮನೆಗೆ ಹೋಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಲ್ ರಶ್ಮಿಯ ಪತಿ ಜೊತೆ ಸಂಬಂಧದ ಹೊಂದಿದ್ದಾಳೆ ಎಂಬ ಅನುಮಾನ ನಿಖಿಲ್​ಗೆ ಬಂದಿತ್ತು. ಆಕೆ ಮತ್ತೆ ಗರ್ಭಿಣಿಯಾಗಿದ್ದರು. ಈ ಬಾರಿ, ನಿಖಿಲ್ ಮಗುವನ್ನು ಉಳಿಸಿಕೊಳ್ಳಲು ಬಯಸಿದ್ದಳು. ಹಾಗೆಯೇ ಮಗುವನ್ನು ತನ್ನ ಜೊತೆಯೇ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಳು. ದಾಳಿಗೂ ಮುನ್ನ ಸೋನಾಲ್ ರಶ್ಮಿ ಮನೆಯಲ್ಲಿ 20-25 ದಿನಗಳ ಕಾಲ ಇದ್ದಳು. ನಿಖಿಲ್ ಸೋನಾಳ್​ನ್ನನು ಹಿಂದಿರುಗುವಂತೆ ಮನವೊಲಿಸಲು ಪ್ರಯತ್ನಿಸಿದ್ದ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ರಶ್ಮಿ ಹಾಗೂ ದುರ್ಗೇಶ್ ತಮ್ಮ ಮಗಳನ್ನು ಕರೆದುಕೊಂಡು ಬರಲು ಶಾಲೆಗೆ ಹೋಗಿದ್ದರು. ಆಗ ಸೋನಲ್ ಆರು ತಿಂಗಳ ಮಗು ಜೊತೆ ಮನೆಯಲ್ಲಿದ್ದರು. ಆಗ ನಿಖಿಲ್ ಅವರ ಮನೆಗೆ ಹೋಗಿ ಮೊದಲು ಸೋನಾಲ್​​ರನ್ನು ಕೊಲೆ ಮಾಡಿ ಬಳಿಕ ಮಗುವಿನ ಬಾಯಿಗೆ ಟೇಪ್ ಅಂಟಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತನ್ನನ್ನು ಯಾರೂ ಪತ್ತೆ ಹಚ್ಚಬಾರದೆಂದು ಫೋನ್ ಅಲ್ಲಿಯೇ ಬಿಟ್ಟು ಹೋಗಿದ್ದಾನೆ.

ರಶ್ಮಿ ಮತ್ತು ದುರ್ಗೇಶ್ ತಮ್ಮ ಹಿರಿಯ ಮಗಳೊಂದಿಗೆ ಶಾಲೆಯಿಂದ ಹಿಂತಿರುಗಿದಾಗ, ರಕ್ತದ ಮಡುವಿನಲ್ಲಿ ಸೋನಾಲ್ ಮತ್ತು ಮಗುವಿನ ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಿಖಿಲ್ ಮೊದಲು ತನ್ನ ಮನೆಗೆ ಹೋಗಿ, ಆತ್ಮಹತ್ಯೆಗೆ ಯತ್ನಿಸಿದ್ದ. ಅದು ವಿಫಲವಾದಾಗ, ದೆಹಲಿ ರೈಲು ನಿಲ್ದಾಣಕ್ಕೆ ಹೋಗಿ, ಹಲ್ದ್ವಾನಿ ಹೋಗುವ ಮೊದಲು ಬರೇಲಿಗೆ ಹೋಗಿದ್ದ. ಹಲ್ದ್ವಾನಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಾನೇ ಕೊಲೆ ಮಾಡಿರುವುದಾಗಿ ನಿಖಿಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.