40
ರೋಮ್: ಇಟಲಿಯ ಬೆರ್ಗಾಮೋ ವಿಮಾನ ನಿಲ್ದಾಣದ ರನ್ ವೇ ಬಳಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ವಿಮಾನದ ಇಂಜಿನ್‌ನೊಳಗೆ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ.
ರನ್‌ವೇನಲ್ಲಿ ಟೇಕ್ ಆಫ್ ಗೆ ಸಿದ್ಧವಾಗಿದ್ದ ವಿಮಾನದೆಡೆಗೆ ಈ ವ್ಯಕ್ತಿ ಧಾವಿಸಿದ್ದು, ಈ ಸಂದರ್ಭ ವಿಮಾನದ ಇಂಜಿನ್ ರಭಸದಿಂದ ಸೆಳೆದ ಕಾರಣ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ನಿಲ್ದಾಣದ ಸಿಬ್ಬಂದಿ ಅಥವಾ ಪ್ರಯಾಣಿಕನಾಗಿರಲಿಲ್ಲ ಎನ್ನಲಾಗಿದೆ.