ಪುರಿ: ಒಡಿಶಾದ ಬೆರ್ಹಾಂಪುರದಲ್ಲಿ ಯುವತಿಯನ್ನು ಆಕೆಯ ಪ್ರಿಯಕರನೇ ಲಾಡ್ಜ್‌ಗೆ ಕರೆದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಆತ ತನ್ನ ಪ್ರೇಯಸಿಯ ಜೊತೆ ತಮ್ಮ ಮದುವೆಯ ವಿಚಾರದಲ್ಲಿ ನಡೆದ ಜಗಳದ ನಂತರ ಕೊಂದಿದ್ದಾನೆ. ಬಳಿಕ ಅವನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ಪ್ರಿಯಾ ಕುಮಾರಿ ಮೊಹರಾನ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಲಂಜಿಪಲ್ಲಿ ಪ್ರದೇಶದ ನಿವಾಸಿ 24 ವರ್ಷದ ಅಭಯ ಕುಮಾರ್ ಮೊಹರಾನ ಎಂದು ಗುರುತಿಸಲಾಗಿದೆ.
ಈ ಇಬ್ಬರೂ ಈ ಲಾಡ್ಜ್‌ಗೆ ಮೂರು ಬಾರಿ ಭೇಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಗೆ ಕಾರಣವನ್ನು ನಾವು ಪರಿಶೀಲಿಸುತ್ತಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ” ಎಂದು ಬೆರ್ಹಾಂಪುರ ಎಸ್‌ಪಿ ತಿಳಿಸಿದ್ದಾರೆ.
ಈ ಜೋಡಿ ಒಟ್ಟು 3 ಬಾರಿ ಇದೇ ಲಾಡ್ಜ್‌ಗೆ ಹೋಗಿದ್ದಾರೆ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅವರು ಹೇಳಿದರು.
ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಆ ಯುವಕ ಹೊಸ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ಗೆ ಹೋದ. ಆತನ ಪ್ರೇಯಸಿ ಪ್ರಿಯಾ ಸ್ವಲ್ಪ ಸಮಯದ ನಂತರ ಒಳಗೆ ಹೋದಳು. ಅವರಿಬ್ಬರೂ ಸ್ವಲ್ಪ ಸಮಯ ಒಟ್ಟಿಗೆ ಕಳೆದ ನಂತರ ಆತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವಳನ್ನು ಹಲವು ಬಾರಿ ಇರಿದು ಕೊಂದಿದ್ದಾನೆ. ಇದರಿಂದಾಗಿ ಅವಳು ಸಾವನ್ನಪ್ಪಿದ್ದಾಳೆ. ಈ ಘಟನೆಯ ನಂತರ, ಆರೋಪಿಯು ತನ್ನ ಕೈಯ ಮೇಲಿನ ಗಾಯದ ಚಿಕಿತ್ಸೆಗಾಗಿ ಸಿಟಿ ಆಸ್ಪತ್ರೆಗೆ ಹೋದನು. ನಂತರ, ಅವನು ಗೋಸಾನಿನುವಾಗಾಂವ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ವರದಿ ತಿಳಿಸಿದೆ.