ಬಾಲಿ: ಅರವತ್ತೈದು ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಮೃತಪಟ್ಟಿದ್ದು, 43 ಮಂದಿ ನಾಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದ ಬಾಲಿಯಲ್ಲಿ ವರದಿಯಾಗಿದೆ.
ಬುಧವಾರ ತಡರಾತ್ರಿ ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಹೊರಟ ಕೆಎಂಪಿ ಟುನು ಪ್ರತಮಾ ಜಯ ಸುಮಾರು ಅರ್ಧ ಗಂಟೆಯ ನಂತರ ಮುಳುಗಿದೆ. ಅದು ಬಾಲಿಯ ಗಿಲಿಮನುಕ್ ಬಂದರಿಗೆ 50 ಕಿ.ಮೀ ಪ್ರಯಾಣ ನಡೆಸುತ್ತಿತ್ತು ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ತಿಳಿಸಿದೆ.
ಹಡಗಿನಲ್ಲಿ 53 ಪ್ರಯಾಣಿಕರು, 12 ಸಿಬ್ಬಂದಿ ಮತ್ತು 14 ಟ್ರಕ್‌ಗಳು ಸೇರಿದಂತೆ 22 ವಾಹನಗಳಿದ್ದವು. ಎರಡು ಶವಗಳನ್ನು ಹೊರತೆಗೆಯಲಾಗಿದೆ ಮತ್ತು 20 ಜನರನ್ನು ರಕ್ಷಿಸಲಾಗಿದೆ ಎಂದು ಬನ್ಯುವಾಂಗಿ ಪೊಲೀಸ್ ಮುಖ್ಯಸ್ಥ ರಾಮ ಸಮತಮ ಪುತ್ರ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಹಡಗು ಮುಳುಗಡೆ: ಇಬ್ಬರು ಮೃತ್ಯು, 43 ಮಂದಿ ನಾಪತ್ತೆ